top of page

Rain Water Harvesting - A Success Story

*Also in Kannada version at the end.


Nowadays, there is a water shortage in many parts of Bengaluru, and the groundwater level is constantly falling.


We are located at the Green Glen layout of Bellandur, one of Bangalore's most densely populated residential areas.


For the past seven years, Twenty-seven households have been living in this residential complex [Malibu Palazzo], and we have been facing water shortages for the past three and a half years and have relied on tanker water.



Rainwater harvesting is the anchor for us. For so many years, so many people, organizations and the government have been trying to raise awareness on Rainwater Harvesting.


However, the general public (including us) does not seem to have shaken their heads. Just as if we have plenty of water to enjoy, people have been keeping RWH on low priority. Despite its delay from our end, its success has been quick and visible. I would like to share some (surprising) things about it.


We have two tubewells (about 900 feet deep). One of which gave us about seven to eight months of water per year, and the other four months we relied on tanker water. Another tubewell had dried up more than seven years back.



Rainwater harvesting was implemented on May 1, 2019, with the cooperation of all members of our housing community, and in collaboration with Mr Vivek, of the "Nesara Rain Water Harvesting".


Our housing complex has two terraces, using rainwater harvesting from a total of thirteen thousand square feet of rooftop. We are storing water for potable purposes from 70% of the rooftop area. And the remaining 30% of the water harvested is left to the dry tubewell.


In the last year and a half, we have been getting at least 4000 litres and a maximum of 12000 litres of water from 30 minutes of rain. And we have a provision to pass excess water to the dry tubewell. This has increased the groundwater level of the active tubewell and reduced tanker water usage by about 40%.


* What is more surprising is that the tubewell that has been running dry for seven years has been reincarnated today with over 475 feet of water today. There can’t be any other happier moment than this in our success story *


Had we implemented rainwater harvesting much earlier, this success would have been achieved long back. Past can’t be rewritten, we are aware today and successful.


If naturally occurring rainwater is harvested properly, we can easily get rid of the water scarcity we face today.


Praveen Huggishettra

WOW Water Donor



 


ಮಳೆ ನೀರು ಕೊಯ್ಲಿನ ಯಶೋ ಗಾದೆ


ಇಂದಿನ ದಿನಗಳಲ್ಲಿ ಬೆಂಗಳೂರಿನ ಹಲವು ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು , ಅಂತರ್ಜಲದ ಮಟ್ಟ ಸಹ ದಿನೇ ದಿನೇ ಕುಸಿಯುತ್ತಿದೆ.

ನಾವು ಇರುವದು ಬೆಂಗಳೂರಿನ ಅತಿ ಹೆಚ್ಚು ಟ್ಯಾಂಕರ್ ನೀರನ್ನು ಬಳಸುವ ಜನ ನಿಭಿಡ ವಸತಿ ಪ್ರದೇಶಗಳಲ್ಲಿ ಒಂದಾದ ಬೆಳ್ಳಂದೂರಿನ ಗ್ರೀನ್ ಗ್ಲೇನ್ ಲೇಔಟನಲ್ಲಿ.


ಕಳೆದ ಏಳು ವರ್ಷಗಳಿಂದ ಈ ಪ್ರದೇಶದ ಇಪ್ಪತ್ತೇಳು ಮನೆಯುಳ್ಳ ಒಂದು ವಸತಿ ಸಮುಚ್ಚಯದಲ್ಲಿ ವಾಸವಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ನೀರಿನ ಅಭಾವವನ್ನು ಎದುರಿಸುತ್ತಿದ್ದೇವೆ ಮತ್ತು ಟ್ಯಾಂಕರ್ ನೀರಿನ ಮೇಲೆಯೇ ಅವಲಂಬಿತವಾಗುವ ಪರಿಸ್ಥಿತಿಯಿದೆ.



ಈ ಸಂದರ್ಭದಲ್ಲಿ ನಮಗೆ ಆಸರೆಯಾಗಿದ್ದು ಮಳೆ ನೀರಿನ ಕೊಯ್ಲು. ಹಲವು ವರ್ಷಗಳಿಂದ ಇದರ ಬಗ್ಗೆ ತುಂಬಾ ಜನ, ಸಂಘಟನೆಗಳು ಮತ್ತು ಸರ್ಕಾರ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದರು , ಸಾಮಾನ್ಯ ಜನರು (ನಮ್ಮನ್ನು ಸೇರಿಸಿ) ಇದರ ಬಗ್ಗೆ ತಲೆಯನ್ನು ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ. "ಕೆಟ್ಟ ಮೇಲೆ ಬುದ್ದಿ ಬಂದಿತು " ಎನ್ನುವ ಹಾಗೇ , ಕಾರಣಾಂತರದಿಂದ ಮಳೆ ನೀರಿನ ಕೊಯ್ಲನ್ನು ಜಾರಿಗೆ ತರುವಲ್ಲಿ ತಡವಾಯಿತು.


ತಡವಾದರೂ ಪರವಾಗಿಲ್ಲಾ ಅದರ ಯಶಸ್ಸು ಬೇಗನೆ ಸಿಕ್ಕಿತೆಂದೇ ಹೇಳಬಹುದು. ಇದರ ಕುರಿತಾದ ಕೆಲವು (ಅಚ್ಚರಿಯ) ವಿಷಯಗಳನ್ನು ತಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.


ನಮಲ್ಲಿ ಎರಡು ಕೊಳವೆಭಾವಿಗಳಿದ್ದು (ಸುಮಾರು ೯೦೦ ಅಡಿ ಆಳ), ಒಂದರಲ್ಲಿ ವರ್ಷಕ್ಕೆ ಏಳರಿಂದ ಎಂಟು ತಿಂಗಳಷ್ಟು ನೀರು ಬರುತ್ತಿದ್ದು ಉಳಿದ ನಾಲ್ಕೈದು ತಿಂಗಳುಗಳ ಕಾಲ ಟ್ಯಾಂಕರ್ ನೀರಿನ ಮೇಲೆಯೇ ಅವಲಂಬಿತವಾಗಿದ್ದೆವು . ಮತ್ತೊಂದು ಕೊಳವೆ ಭಾವಿಯು ಏಳು ವರ್ಷಗಳಿಗಿಂತ ಮೊದಲೇ ಬತ್ತಿ ಹೋಗಿತ್ತು.




ವಸತಿ ಸಮುಚ್ಛಯದ ಎಲ್ಲ ಸದಸ್ಯರ ಸಹಕಾರದೊಂದಿಗೆ ಮತ್ತು "ನೇಸರ ರೇನ ವಾಟರ್ ಹಾರ್ವೆಸ್ಟಿಂಗ್" ಸಂಸ್ಥೆಯ ವಿವೇಕ ಅವರ ಸಹಯೋಗದೊಂದಿಗೆ, ಮೇ ೨೦೧೯ ರಲ್ಲಿ, ಎಪ್ಪತೈದು ಸಾವಿರದಷ್ಟು ಹಣವನ್ನು ವ್ಯಯಿಸಿ ಮಳೆ ನೀರಿನ ಕೊಯ್ಲನ್ನು ಜಾರಿಗೆ ತರಲಾಯಿತು.


ವಸತಿ ಸಮುಚ್ಛಯವು ಎರಡು ತಾರಸಿಗಳನ್ನು ಹೊಂದ್ದಿದ್ದು, ಒಟ್ಟು ಹದಿಮೂರು ಸಾವಿರ ಚದರು ಅಡಿಗಳಷ್ಟು ಜಾಗದಿಂದ ಮಳೆ ನೀರನ್ನು ಸಂಗ್ರಹಿಸಿ, ಶೇಕಡಾ ೭೦ ರಷ್ಟು ನೀರನ್ನು ಬಳಕೆ ಮಾಡಲು ಉಪಯೋಗಿಸುತ್ತಿದ್ದೇವೆ. ಹಾಗೂ ಉಳಿದ ಶೇಕಡಾ ೩೦ ರಷ್ಟು ನೀರನ್ನು ಬತ್ತಿ ಹೋಗಿದ್ದ ಕೊಳವೆ ಭಾವಿಗೆ ಬಿಡುತ್ತಿದ್ದೇವೆ.


ಕಳೆದ ಒಂದೂವರೆ ವರ್ಷದಲ್ಲಿ, ೩೦ ನಿಮಿಷದ ಮಳೆಯಿಂದ ಕನಿಷ್ಠ ೪೦೦೦ ಮತ್ತು ಗರಿಷ್ಠ ೧೨೦೦೦ ದಷ್ಟು ನೀರನ್ನು ಪಡೆಯುತ್ತಿದ್ದೇವೆ. ಮತ್ತು ಹೆಚ್ಚಿಗೆಯಾದ ನೀರನ್ನು ಕೊಳವೆ ಭಾವಿಗೆ ಬಿಡುವ ವೆವಸ್ಧೆಯನ್ನು ಸಹ ಮಾಡಿದ್ದೇವೆ. ಇದರಿಂದಾಗಿ ಸಕ್ರಿಯ ಕೊಳವೆ ಭಾವಿಯ ಅಂತರ್ಜಲದ ಮಟ್ಟವು ಹೆಚ್ಚಾಗಿದ್ದು ಟ್ಯಾಂಕರ್ ನೀರಿನ ಬಳಕೆಯನ್ನು ಶೇಕಡಾ ೪೦ರಷ್ಟು ಕಡಿಮೆ ಮಾಡಿದ್ದೇವೆ .




*ಇನ್ನು ಅಚ್ಚರಿಯ ವಿಷಯವೆಂದರೆ, ಏಳು ವರ್ಷಗಳಿಂದ ಬತ್ತಿ ಹೋಗಿದ್ದ ಕೊಳವೆ ಭಾವಿಯು ಇಂದು ಪುನರ್ಜನ್ಮ ಪಡೆದಿದ್ದು ೪೭೫ ಅಡಿಗಳಷ್ಟು ನೀರನ್ನು ಹೊಂದಿದೆ, ಇದಕ್ಕಿಂತ ಹೆಚ್ಚಿನ ಸಂತೋಷ್ ಮತ್ತೊಂದಿಲ್ಲಾ. *


ಮಳೆ ನೀರಿನ ಕೊಯ್ಲನ್ನು ಇನ್ನು ಮೊದಲೇ ಜಾರಿಗೆ ತಂದ್ದಿದ್ದರೆ, ಈ ಯಶಸ್ಸು ಮೊದಲೇ ಸಿಗುತ್ತಿತ್ತೇನೋ? ಆದರೂ ಪರವಾಗಿಲ್ಲ ಇವಾಗಲಾದರೂ ಅರಿವು ಮೂಡಿಸಿಕೊಂಡು ಯಶಸ್ಸನ್ನು ಪಡೆದವೆಂಬ ಹೆಮ್ಮೆ.


ಎಲ್ಲರೂ ಸಹ ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ವ್ಯರ್ಥ ಮಾಡದೇ ಸರಿಯಾಗಿ ಬಳಸಿಕೊಂಡರೆ, ಇಂದು ಎದುರಾಗಿರುವ ನೀರಿನ ಸಮಸ್ಸೆಯನ್ನು ಹೋಗಲಾಡಿಸಬಹುದು.


ಪ್ರವೀಣ ಹುಗ್ಗಿಶೆಟ್ಟರ

WOW Water Donor






372 views0 comments

Recent Posts

See All
bottom of page